V Dot 9 Events India Institute
ಅಂದು ಇಂಗ್ಲಿಷ್ ಬರೋದಿಲ್ಲ ಅಂತ REJECT ಆದೋರು ಇಂದು ಸಂಸ್ಥೆ ಕಟ್ಟಿದರು
‘ಸಾಧನೆ ಎಂದರೆ ವೈಯಕ್ತಿಕವಾಗಿ ನಾವು ಎಷ್ಟು ಬೆಳೆದಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ಸಾಧನೆ ಎಷ್ಟು ಜನರಿಗೆ ಸ್ಫೂರ್ತಿದಾಯಕವಾಗಿದೆ ಎಂಬುವುದೇ ಮುಖ್ಯ…! ಅದೇ ನಿಜವಾದ ಸಾಧನೆ’. ಇತ್ತೀಚೆಗೆ ಬಹಳ ಮುಂಛೂಣಿಯಲ್ಲಿರುವ ಇವೆಂಟ್ ಮ್ಯಾನೇಜೆಂಟ್ ಕ್ಷೇತ್ರದಲ್ಲಿ ಸಾಧನೆಗೈದ ಆಂಕರ್ ಅರುಣ್ ಅವರ ಕಥೆ ಎಷ್ಟೋ ಯುವಕರಿಗೆ ಸ್ಪೂರ್ತಿದಾಯಕ.
2014ರಲ್ಲಿ ಆಂಕರ್ ಅರುಣ್ ಬೆಂಗಳೂರಲ್ಲಿ ಇವೆಂಟ್ ಮ್ಯಾನೇಜೆಂಟ್ ಕೋರ್ಸ್ ಕಲಿಯಲು ಒಂದು ಖಾಸಗಿ ಕೋಚಿಂಗ್ ಸೆಂಟರ್ ಗೆ ಹೋದಾಗ ಅಲ್ಲಿನವರು ಅರುಣ್ ಅವರಿಗೆ ಕೇಳಿದ ಪ್ರಶ್ನೆ – ನಿಮಗೆ ಇಂಗ್ಲಿಷ್ ಬರುತ್ತಾ? ಬಂದರೆ ಅಷ್ಟೇ ಇಲ್ಲಿ ಪ್ರವೇಶ ಎಂದು. ಇದನ್ನು ಅವಮಾನವೆಂದು ತೆಗೆದುಕೊಳ್ಳದೆ, ಸವಾಲಾಗಿ ಸ್ವೀಕರಿಸಿದ ಅರುಣ್ ಅವರು ಕನ್ನಡದಲ್ಲಿ ಇವೆಂಟ್ ಮ್ಯಾನೇಜೆಂಟ್ ಕಲಿಸಿಕೊಡುವ ಸಲುವಾಗಿ 2024ರಲ್ಲಿ ಒಂದು ಸಂಸ್ಥೆಯನ್ನು ಕಟ್ಟುತ್ತಾರೆ ಅದುವೇ ‘V Dot 9 Events India Institute’
ಕನ್ನಡದಲ್ಲಿ ಇವೆಂಟ್ ಮ್ಯಾನೇಜೆಂಟ್ UNIVERSITY ತೆರೆಯುವ ಗುರಿ
ಇಷ್ಟೇ ಅಲ್ಲದೇ ಕನ್ನಡದಲ್ಲಿ ಇವೆಂಟ್ ಮ್ಯಾನೇಜೆಂಟ್ UNIVERSITY ತೆರೆಯುವ ಗುರಿ ಹೊಂದಿರುವ ಆಂಕರ್ ಅರುಣ್ ಅವರ ದೂರದೃಷ್ಟಿ ನಿಜವಾಗಲೂ ಮೆಚ್ಚತಕ್ಕದ್ದೆ.
ಬೆಂಗಳೂರಿನ ಉಳ್ಳಾಲ್ ಮುಖ್ಯ ರಸ್ತೆಯಲ್ಲಿರುವ V Dot 9 Events India Instituteಗೆ ನೀವು ಭೇಟಿಯಾಗಹುದು. ಹೆಚ್ಚಿನ ಮಾಹಿತಿಗೆ 9900002373ಗೆ ಕರೆ ಮಾಡಿ ಅಥವಾ www.vdot9events.com ವೆಬ್ಸೈಟ್ ಗೆ ಭೇಟಿ ನೀಡಿ.